Monday 19 May 2014

ಶಾಕ್ ನೀಡುತ್ತಿರುವ ಮೊಬೈಲ್ ಬಿಲ್

 ಇಂದು ಮೊಬೈಲ್ ಯುಗ ನಡೆಯುತ್ತಿದೆ. ಪ್ರತಿಯೊಬ್ಬರ ಜೇಬಲ್ಲೂ, ಕೈಯಲ್ಲೂ, ಕತ್ತಲ್ಲೂ ಮೊಬೈಲ್ ಪೋನ್‍ಗಳೇ ರಾರಾಜಿಸುತ್ತಿರುತ್ತವೆ. ಸೆಲ್‍ಫೋನ್‍ಗಳಿಲ್ಲದೆ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದಷ್ಟು ನಾವು ಮೊಬೈಲ್‍ಪೋನ್‍ಗಳಿಗೆ ಅಡಿಕ್ಟ್ ಆಗಿದ್ದೇವೆ.
ಸಾಮಾನ್ಯರಿಂದ ಹಿಡಿದು ಸಿರಿವಂತರವರೆಗೂ ಮೊಬೈಲ್ ಫೋನ್‍ಗಳ ಬಳಕೆ ಮಾಮೂಲಿಯಾಗಿದೆ. ಈ ಮಧ್ಯೆ ಮೊಬೈಲ್ ಫೋನ್ ಬಳಸುವವರ ಜೇಬು ತಮಗರಿವಲ್ಲದೆಯೇ ತೂತಾಗುತ್ತಿವುದು ಒಂದು ಅಚ್ಚರಿ ಮೂಡಿಸುವ ಸಂಗತಿ. ಒಂದು ಸಮೀಕ್ಷೆ ಪ್ರಕಾರ ಮೊಬೈಲ್ ಫೋನ್ ಬಳಸುವ ಪ್ರತಿಯೊಬ್ಬರೂ ತಿಂಗಳಿಗೆ ಸರಾಸರಿ ಕನಿಷ್ಠ 300 ರೂ.ಗಳಿಂದ ಸಾವಿರ ರೂಪಾಯಿಗಳವರೆಗೆ ಬಿಲ್ ಪಾವತಿ ಮಾಡುತ್ತಿದ್ದಾರೆ. ಅದರಲ್ಲೂ ಸ್ಮಾರ್ಟ್ ಫೋನ್‍ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಮೇಲಂತೂ ಮೊಬೈಲ್‍ಗಾಗಿ ಪಾವತಿಸುತ್ತಿದ್ದ ಹಣ ದುಪ್ಪಟ್ಟಾಗಿದೆ. ಕಾರಣ ಮಾತನಾಡಲಿಕ್ಕೆ ಬಳಸುವ ಹಣಕ್ಕಿಂತ ಇಂಟರ್‍ನೆಟ್‍ಗೆಂದು ವ್ಯಯಿಸುವ ಹಣವೇ ಹೆಚ್ಚು.  ಫೇಸ್‍ಬುಕ್, ಟ್ವಿಟರ್, ವಾಟ್ಸಪ್, ವೀಚಾಟ್, ಲೈನ್‍ನಂತಹ ಚಾಟಿಂಗ್ ಅಪ್ಲಿಕೇಷನ್‍ಗಳ ಬಳಕೆ ಇಂದಿನವರಿಗೆ ಅನಿವಾರ್ಯವಾದುದರಿಂದ ಇಂಟರ್‍ನೆಟ್ ಇಲ್ಲದೇ ಮೊಬೈಲ್‍ಫೋನ್ ಬಳಕೆ ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿ ಎದುರಾಗಿದೆ.
ಮೊಬೈಲ್‍ಫೋನ್‍ಗಳಲ್ಲಿ ಇಂಟರ್‍ನೆಟ್ ಸೌಲಭ್ಯ ಬಂದಮೇಲೆ ಸ್ಮಾರ್ಟ್ ಫೋನ್ ಬಳಸುವವರೆಲ್ಲರೂ ತಿಂಗಳಿಗೆ ಇಂಟರ್‍ನೆಟ್‍ಗೆಂದೇ 300 ರೂ. ನಿಂದ 400 ರೂಗಳ ವರೆಗೆ ವ್ಯಯಿಸುತ್ತಿದ್ದಾರೆ. 2ಜಿ ಹಾಗೂ 3ಜಿ ಸೌಲಭ್ಯವಿರುವ ಮೊಬೈಲ್ ಬಳಕೆದಾರರು ಇಷ್ಟು ಹಣ ಪಾವತಿಸುವುದು ಸಾಮನ್ಯವಾಗಿದೆ. ಏಕೆಂದರೆ ಪ್ರತಿ ದಿನ, ಪ್ರತಿ ಕ್ಷಣದ ಅಪ್‍ಡೇಟ್‍ಗಳಿಗೆ ಡಾಟಾ ಅನಿವಾರ್ಯವಾಗಿದೆ. ಇಂಟರ್‍ನೆಟ್ ಇಲ್ಲದ ಸ್ಮಾರ್ಟ್‍ಫೋನ್ ಖಾಲಿ ಡಬ್ಬಾಗೆ ಸಮ ಎಂದೆನಿಸತೊಡಗುತ್ತದೆ.
 ಈ ಮಧ್ಯೆ ಮೊಬೈಲ್ ಕಂಪನಿಗಳು ಹಾಗೂ ಟೆಲಿಕಾಂ ಸಂಸ್ಥೆಗಳು ಆಕರ್ಷಕ ಮಾಡೆಲ್ ಹಾಗೂ ಆಫರ್‍ಗಳನ್ನು ನೀಡಿ ಮೊಬೈಲ್‍ಗಳ ಮೇಲೆ ಸಾಮಾನ್ಯರ ಪ್ರೀತಿ ಹೆಚ್ಚಿಸುವುದರ ಮೂಲಕ ತಮ್ಮ ಆದಾಯವನ್ನೂ ದುಪ್ಪಟ್ಟಾಗಿಸಿಕೊಳ್ಳುತ್ತಿವೆ.  ಪ್ರತಿದಿನ ಅಪ್‍ಡೇಟ್ ಆಗುವ ಹೊಸಹೊಸ ಅಪ್ಲಿಕೇಷನ್ಸ್‍ಗಳು ಸಹಜವಾಗಿ ಇಂಟರ್‍ನೆಟ್ ಬಳಸಲು ಪ್ರೇರೇಪಿಸುತ್ತಿವೆ.
ನಿಮಗೆ ತಿಳಿದಿರುವಂತೆ ಇತ್ತೀಚೆಗೆ ವೋಡಫೋನ್ ಹಾಗೂ ಏರ್‍ಟೆಲ್ ಟೆಲಿಕಾಂ ಸಂಸ್ಥೆಗಳು ತಮ್ಮ ಕರೆ ದರಗಳನ್ನು ಶೇ.20 ರಿಂಧ 25 ರಷ್ಟು ಹೆಚ್ಚಿಸಿವೆ, ಜೊತೆಗೆ ಇಂಟರ್‍ನೆಟ್ ದರಗಳನ್ನು ಹೆಚ್ಚಿಸಿವೆ. ಸಾಮಾನ್ಯವಾಗಿ 1 ತಿಂಗಳು ವ್ಯಾಲಿಡಿಟಿಯುಳ್ಳ 1 ಜಿಬಿ 2ಜಿ ಡಾಟಾದ ದರ 98 ರಿಂದ 150 ರ ಆಸುಪಾಸಿನಲ್ಲಿತ್ತು. ಈಗ ಒಂದು ತಿಂಗಳ ವ್ಯಾಲಿಡಿಟಿಯನ್ನು 21 ದಿನಕ್ಕೆ ನಿಗದಿಗೊಳಿಸುವುದರ ಮೂಲಕ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕುತ್ತಿವೆ. ನಿಮಗೆ 1 ಜಿಬಿ 2ಜಿ ಡಾಟಾಗೆ ಬೇಕೆಂದರೆ 170 ರೂ. ಪಾವತಿಸುವುದು ಅನಿವಾರ್ಯ. ಅದರಲ್ಲೂ 3ಜಿ ಮೊಬೈಲ್ ಬಳಸುತ್ತಿದ್ದರೆ ದುಪ್ಪಟ್ಟು ಹಣ ಪಾವತಿಸಲೇಬೇಕಾದ ಸಂದರ್ಭ ಅನಿವಾರ್ಯವಾಗುತ್ತದೆ.
ಯಾವ ಪ್ಲಾನ್ ಆಯ್ದುಕೊಳ್ಳಬೇಕು, ಯಾವ ಪ್ಲಾನ್ ಸೂಕ್ತವಾದುದು ಎಂಬುದು ಗ್ರಾಹಕರ ತಲೆ ಬಿಸಿ ಮಾಡಿದೆ. ಏಕೆಂದರೆ ಯಾವ ಪ್ಲಾನ್ ಆಯ್ದುಕೊಂಡರೂ ಒಂದಲ್ಲಾ ಒಂದು ರೀತಿಯಲ್ಲಿ ಟೆಲಿಕಾಂ ಸಂಸ್ಥೆಗಳು  ಜೇಬನ್ನು ಕತ್ತರಿಸುತ್ತಲೇ ಇರುತ್ತದೆ.
ಅಗ್ರ ಟೆಲಿಕಾಂ ಸಂಸ್ಥೆಗಳಾದ ಭಾರ್ತಿ ಸಂಸ್ಥೆಯ ಏರ್‍ಟೆಲ್ ಹಾಗೂ ವೊಡಫೆÇೀನ್, ಸರಕಾರಿ ಹರಾಜಿನಲ್ಲಿ ಮೊಬೈಲ್ ತರಂಗಾಂತರÀ ಅಧಿಪತ್ಯಕ್ಕೆ ಪೈಪೆÇೀಟಿಯಿಂದ ಬಿಡ್ ಮಾಡುತ್ತಿರುವುದರಿಂದ ಬಹಳ ಬೇಗ ನಿಮ್ಮ ಮೊಬೈಲ್ ಇನ್ನೂ ದುಬಾರಿಯಾಗಲಿದೆ.
ಮಾರುಕಟ್ಟೆಯ ಶೇ 22 ರಷ್ಟು(20 ಕೋಟಿ ಚಂದಾದಾರರು) ಚಂದಾದಾರರನ್ನು ಹೊಂದಿರುವ ಭಾರ್ತಿ ಏರ್‍ಟೆಲ್ ಹಾಗೂ ವೋಡಫೋನ್ ಸಂಸ್ಥೆಗಳು ಕರೆಯ ದರದಲ್ಲೂ ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದು ಪ್ರತಿ ಲೋಕಲ್ ಕರೆಗೆ 50 ರಿಂದ 70 ಪೈಸೆ ಸಾಮಾನ್ಯವಾಗಿದೆ. ಇದರೊಂದಿಗೆ ಕರೆಯದ ದರೆಗಳನ್ನು ಕಡಿಮೆಮಾಡಿಕೊಳ್ಳಲು ರಿಚಾರ್ಜ್ ಮಾಡಿಸಿಕೊಂಡರೂ ಮೊದಲಿನ ಎರಡು ಕರೆಗಳಿಗೆ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾಗಿದೆ.
ಇದ್ದುದರಲ್ಲೇ ಬಿಎಸ್‍ಎನ್‍ಎಲ್ ಇನ್‍ಟರ್‍ನೆಟ್ ಪ್ಯಾಕ್‍ನ್ನು ಕಡಿಮೆ ದರ (2ಜಿ/3ಜಿ 1ಜಿಬಿ ಡಾಟಾಗೆ 139 ರೂ.)ದ ಸೇವೆ ಒದಗಿಸುತ್ತಿದೆ.

* ಪಾಪಾ ಪ್ರೀತ್ಸೋರ್ ಪ್ರಾಬ್ಲಮ್ ಯಾಕ್ ಕೇಳ್ತಿರಾ..!
ಹೌದು, ಇತ್ತೀಚೆಗೆ ಟೆಲಿಕಾಂ ಸಂಸ್ಥೆಗಳು ಕರೆಯ ದರಗಳು ಹಾಗೂ ಇಂಟರ್‍ನೆಟ್ ಪ್ಯಾಕ್‍ನ ದರಗಳನ್ನು ಹೆಚ್ಚಿಸಿರುವುದರಿಂದ ಗಂಟೆಗಟ್ಟಲೆ ಫೋನ್‍ನಲ್ಲೇ ರೋಮ್ಯಾನ್ಸ್ ಮಾಡುತ್ತಿದ್ದ ಪ್ರೇಮಿಗಳಿಗೆ ತಳಮಳ ಆರಂಭವಾಗಿದೆ. ಇತ್ತ ಮಾತನಾಡದೆಯೂ ಇರದೆ, ಅತ್ತ ಏರುತ್ತಲೇ ಇರುವ ಮೊಬೈಲ್ ಬಿಲ್‍ನ ಟಾರ್ಚರ್‍ನ ನಡುವೆ ಸಿಲುಕಿ ಕೈಕೈಹಿಸುಕಿಕೊಳ್ಳುತ್ತಿದ್ದಾರೆ. ಯಾವುದೇ ನೆಟ್‍ವರ್ಕ್‍ಗೆ ಬದಲಾಯಿಸಿಕೊಂಡರೂ ಕಾಲ್ ರೇಟ್‍ಗಳು ಕಡಿಮೆಯಾಗುವುದಿಲ್ಲ. ಯಾವುದೇ ಆಫರ್‍ಗಳ ಮೊರೆಹೋದರೂ ಒಂದಲ್ಲಾ ಒಂದು ರೀತಿಯಲ್ಲಿ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾದುದರಿಂದ ತಮ್ಮ ಮಾತಿಗೆ ಬ್ರೇಕ್ ಹಾಕುವುದು ಅನಿವಾರ್ಯವಾಗಿದೆ. ಮೊಬೈಲ್‍ನ ಬಿಲ್ ಪ್ರೇಮಿಗಳ ವಿರಹ ವೇದನೆಯನ್ನು ಹೆಚ್ಚಿಸುತ್ತಿವೆ. ಗಂಟೆಗಟ್ಟಲೇ ಮಾತನಾಡಿ ರೂಢಿಯಾಗಿರುವವರಿಗಂತೂ ಒಮ್ಮೆಲೇ ಮಾತಿಗೆ ಬ್ರೇಕ್ ಹಾಕುವುದು ಎಷ್ಟು ಕಷ್ಟ ಎಂದು ಪ್ರೀತಿಸುತ್ತಿರುವವರಿಗಷ್ಟೇ ಗೊತ್ತು.

* ಇಂಟರ್‍ನೆಟ್ ಡಾಟಾ ಮಿತವಾಗಿ ಬಳಸೋದು ಹೇಗೆ?
  • ಅನಿವಾರ್ಯವಿದ್ದಾಗ ಮಾತ್ರ ನಿಮ್ಮ ಸ್ಮಾರ್ಟ್‍ಪೋನ್‍ನಲ್ಲಿ ಇಂಟರ್‍ನೆಟ್ ಆನ್ ಮಾಡಿಕೊಂಡು ಬಳಸಿ.
  • ವಿಡಿಯೋ ಡೌನ್‍ಲೋಡ್ ಮಾಡುವುದನ್ನು ಕಡಿಮೆಮಾಡಿ.
  • ಯೂಟೂಬ್‍ನ್ನು ಮಿತವಾಗಿ ಬಳಸಿ.
  • ನಿಮ್ಮ ಮೊಬೈಲ್‍ನ ಜಿಪಿಎಸ್‍ನ್ನು ಆಪ್ ಮಾಡಿಟ್ಟುಕೊಳ್ಳಿ.
  • ನಿಮ್ಮ ಮೊಬೈಲ್‍ನಲ್ಲಿನ ಗೂಗಲ್ ಪ್ಲಸ್ ಇದ್ದಲ್ಲಿ ಅದರ ಬ್ಯಾಕಪ್ ಸೌಲಭ್ಯವನ್ನು ಆಫ್ ಮಾಡಿಟ್ಟುಕೊಳ್ಳಿ. ಇದರಿಂದ ಹೆಚ್ಚಿನ ಡಾಟಾವನ್ನು ಸೇವ್ ಮಾಡಬಹುದು.
  • ಪ್ರಯಾಣದ ವೇಳೆ ಗೂಗಲ್ ಮ್ಯಾಪ್ ಬಳಸದಿದ್ದರೆ ಹೆಚ್ಚಿನ ಡಾಟಾವನ್ನು ಸೇವ್ ಮಾಡಿಕೊಳ್ಳಬಹುದು.
  • ಹಾಗೆ, ನೀವು ನಿಮ್ಮ ಮೊಬೈಲ್‍ನಲ್ಲಿ ತೆಗೆದ ಎಲ್ಲಾ ಪೋಟೋಗಳನ್ನು ಶೇರ್ ಮಾಡುವ ಬದಲು ಆಯ್ಡ ಪೋಟೋಗಳನ್ನು ಮಾತ್ರ ಶೇರ್ ಮಾಡಿ.
  • ಫೇಸ್‍ಬುಕ್, ವಾಟ್ಸ್‍ಅಪ್, ಲೈನ್, ವೀಚಾಟ್‍ಗಳಂತಹ ಅಪ್ಲಿಕೇಷನ್‍ಗಳು ಸದಾ ಚಾಲ್ತಿತಿಯಲ್ಲಿದ್ದರೆ ಹೆಚ್ಚಿನ ಡಾಟಾವನ್ನು ಬಳಸಿಕೊಳ್ಳುತ್ತವೆ ಆದ್ದರಿಂದ, ಅನಿವಾರ್ಯತೆಯಿದ್ದಾಗ ಚಾಟ್‍ಮಾಡಿ ಮಿಕ್ಕ ಸಮಯದಲ್ಲಿ ಇಂಟರ್‍ನೆಟ್ ಆಫ್ ಮಾಡಿಬಿಡಿ.
  • ವೈಫೈ ಲಭ್ಯವಿದ್ದಲ್ಲಿ ನಿಮ್ಮ ನೆಟ್ ಕನೆಕ್ಷನ್‍ನ್ನು ಆಫ್ ಮಾಡಿ ವೈಫೈ ಲಾಭ ಪಡೆದುಕೊಳ್ಳಿ.

* ಮೊಬೈಲ್ ಬಿಲ್ ಕಡಿಮೆ ಮಾಡೋದು ಹೇಗೆ?
  • ಕೈಯಲ್ಲಿ ಮೊಬೈಲ್ ಇದೇ ಎಂದು ಪ್ರತಿ ಸಣ್ಣಪುಟ್ಟ ಕೆಲಸಗಳಿಗೂ ಕಾಲ್ ಮಾಡುವ ಬದಲು ಎಸ್‍ಎಮ್‍ಎಸ್ ಮಾಡುವುದು ಉತ್ತಮ.
  • ಎಸ್‍ಟಿಡಿ, ಐಎಸ್‍ಡಿ ಕರೆಗಳನ್ನು ನೀವು ಮಾಡುತ್ತಿದ್ದರೆ ಈ ಕರೆಗಳಿಗಾಗಿಯೇ ಇರುವ ಆಫರ್ ಟಾರಿಫ್‍ಗಳನ್ನು ಆಯ್ದುಕೊಳ್ಳಿ.
  • ಕರೆದರಗಳನ್ನು ಕಡಿಮೆಮಾಡಿಕೊಳ್ಳಲು ಕುಟುಂಬದವರೆಲ್ಲ ಒಂದೇ ನೆಟ್‍ವರ್ಕ್ ಸಿಮ್‍ಗಳನ್ನು ಉಪಯೋಗಿಸುವುದು ಲೇಸು.
  • ನಿಮ್ಮ ಅವಶ್ಯಕತೆಗೆ ಹೊಂದಿಕೊಳ್ಳುವಂತಹ ಸರಿಯಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಿ.

1 comment:

  1. Pokies, Casino, Poker, Slots - Oyster Hotel Reviews
    A place to try and win cash 올인구조대 prizes and other 12bet prizes in the style 커뮤니티 모음 of traditional 온라인포커 casino gaming. The casino's nextbet slots can be found across the

    ReplyDelete