Monday 19 May 2014

ಬದುಕಲು ಸ್ಫೂರ್ತಿ ತುಂಬಿದ ಆ ಫೇಸ್ ಬುಕ್ ಸ್ಟೇಟಸ್

ಫೇಸ್‍ಬುಕ್ ಎಂಬ ಸಾಮಾಜಿಕ ಸಂಪರ್ಕ ಮಾಧ್ಯಮ ಜನರ ಮೊಬೈಲ್‍ಗೆ ಬಂದದ್ದೆ ತಡ. ಊಹಿಸಲಾಗದಷ್ಟು ವೇಗವಾಗಿ ಇಂದು ಪ್ರತಿಯೊಬ್ಬರೂ ಅದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಫೇಸ್‍ಬುಕ್ ಬಗ್ಗೆ ಹಲವರು ನಾನಾ ರೀತಿ ಮಾತಾಡ್ತಾರೆ. ಅದು ಜನರ ಸಂಸ್ಕøತಿಯನ್ನೇ ಹಾಳುಮಾಡುತ್ತ್ತಿದೆ. ಸಮಾಜದ ಸ್ವಾಸ್ಥ್ಯತೆಯನ್ನೇ ಸಂಹಾರಮಾಡುತ್ತಿದೆ. ಸಂಬಂಧಗಳನ್ನು ಕೊಂದುಹಾಕುತ್ತಿದೆ. ಹೀಗೆ ನಾನಾ ಬಗೆಯ ಕಮೆಂಟ್‍ಗಳ ಫೇಸ್‍ಬುಕ್ ಬಗ್ಗೇನೇ ಅದೇ ಫೇಸ್‍ಬುಕ್‍ನಲ್ಲಿ ಆಗಾಗ ಕೇಳುತ್ತಲೇ ಕೇಳಿಬರುತ್ತಿರುತ್ತವೆ. ಅದಕ್ಕೆ ಉತ್ತರ ನೀವೇ ಹುಡುಕಿ.
ಆದರೆ ನನ್ನ ಪ್ರಕಾರ ಫೇಸ್‍ಬುಕ್ ಎಂಬುದು ಒಂದು ಕ್ರಾಂತಿ ಎಂದರೆ ತಪ್ಪಾಗಲಾರದು. ಒಂದು ಕ್ಷಣÀ ಅದರ ಬಗ್ಗೆ ನಾನು ಹೆಮ್ಮೆ ಪಟ್ಟಿದ್ದೂ ಇದೆ. ಫೇಸ್‍ಬುಕ್‍ನ್ನು ಹೀಗೂ ಬಳಸಿಕೊಳ್ಳಬಹುದಾ ಎಂದು. ಒಂದು ಒಳ್ಳೆಯ ಸಂದೇಶವನ್ನು ಲಕ್ಷಾಂತರ ಜನರಿಗೆ ಅತೀ ಸರಳವಾಗಿ ರವಾನಿಸುವಲ್ಲಿ ಫೇಸ್‍ಬುಕ್ ನನಗೆ ಗ್ರೇಟ್ ಅನಿಸಿತ್ತು. ಅದು ಮನುಷ್ಯನ ಮನಸ್ಸನೂ ಬದಲಾಯಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಫೇಸ್‍ಬುಕ್‍ನಿಂದ ಯಾರು ಬದಲಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ಮಾತ್ರ ಫೇಸ್‍ಬುಕ್‍ನಿಂದ ಬದಲಾಗಿದ್ದೇನೆ ಹೇಗೆ ಅಂತೀರಾ?
 ನೀವೆ ಹೇಳಿ ನಾವು ಚಾಕುವನ್ನು ತರಕಾರಿ ಕತ್ತರಿಸಲೂ ಬಳಸುತ್ತೇವೆ, ಕೊಲೆ ಮಾಡಲೂ ಬಳಸುತ್ತೇವೆ ಇಲ್ಲಿ ತಪ್ಪು ಚಾಕೂವಿನದ್ದೋ ಅಥವಾ ಅದನ್ನು ಬಳಸುವ ಮನುಷ್ಯರದ್ದೋ?
ಯಾವುದಾದರೂ ಅಷ್ಟೇ ಪ್ರತಿಯೊಂದಕ್ಕೂ ಎರಡು ಮುಖಗಳಿರುತ್ತವೆ. ಒಂದು ಕೆಟ್ಟದ್ದು ಇನ್ನೊಂದು ಒಳ್ಳೆಯದು. ಅದನ್ನು ನಾವು ಹೇಗೆ ಬಳಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ 
ಎಲ್ಲರಂತೆ ನನ್ನದೂ ಒಂದು ಫೇಸ್‍ಬುಕ್ ಅಕೌಂಟ್ ಇದೆ. ಮೊನ್ನೆ ನನ್ನ ಫೇಸ್‍ಬುಕ್ ಅಕೌಂಟ್‍ನ ಗೋಡೆಯ ಮೇಲೆ ಯಾರೋ ಅಪ್‍ಡೇಟ್ ಮಾಡಿದ ಸ್ಟೇಟಸ್ ಒಂದನ್ನು ನೋಡಿದೆ. ಆ ಸ್ಟೇಟಸ್ ನೋಡಿ ನನಗೂ ತಕ್ಷಣ ಮನಸ್ಸಿಗೆ ಒಂದು ತರಹದ ಕುತೂಹಲ ಉಂಟಾಯಿತು. ಮತ್ತೆ ಬೇರೆ ಯಾವುದೇ ಸ್ಟೇಟಸ್ ಸಹ ಅಷ್ಟೊಂದು ಮನಸ್ಸಿಗೆ ಹಿಡಿಸಿದ್ದಿಲ್ಲ. ಮತ್ತು ಆ ಸ್ಟೇಟಸ್ ನೋಡಿದಾಗಿನಿಂದ ನಾನು ಅದನ್ನು ಅನುಸರಿಸಬೇಕು ಎಂದು ಅನಿಸತೊಡಗಿತು ಆ ಸ್ಟೇಟಸ್ ಹೀಗಿದೆ ನೋಡಿ.
"ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು"
ಇದರಲ್ಲಿ ಬಹಳಷ್ಟು ಸತ್ಯ ಇದೆ ಎಂದೆನಿಸತೊಡಗಿತು . ಹುಟ್ಟು ನಮ್ಮ ಅರಿವಿಗೆ ಇಲ್ಲದೆ ,ಮತ್ತು ನಾವು ಶ್ರೀಮಂತರೋ, ದರಿದ್ರರೋ ತಿಳಿಯದೆ ಆಗುವಂತದು, ಅದು ನಮ್ಮ ತಪ್ಪಲ್ಲ ಆದರೆ ಸಾವು ಸಹ ಅದೇ ದರಿದ್ರದಲ್ಲಿ ಆದರೆ ಅದಕ್ಕೆ ಪೂರ್ತಿ ಹೊಣೆ ಆ ಮನುಷ್ಯನೇ ಎಂದೆನಿಸಿತು. ಯಾಕೆಂದರೆ ಹುಟ್ಟಿದ ಕೆಲವು ನಂತರದ ದಿನಗಳ ಬಳಿಕ ಅವರ ಜೀವನಕ್ಕೆ ಅವರೇ ಜವಾಬ್ದಾರಿ ಎನ್ನುವುದು ನನ್ನ ವಾದ, ಕಾರಣ ನಮಗೆ ಬುದ್ದಿ ಬಂದಾದ ನಂತರ ನಮ್ಮ ನಮ್ಮ ಜೀವನದ ಗುರಿ ಹೊತ್ತು ನಮ್ಮ ಬಾಳಿನ ದಾರಿಯನ್ನು ಕೊನೆಯತನಕ ಹೇಗೆ ಒಯ್ಯಬೇಕು ಎಂದು ನಿರ್ಧಾರ ಮಾಡುವವರು ನಾವೇ, ಹಾಗಿರುವಾಗ ನಮ್ಮ ಜೀವನದ ಕೊನೆಯ ಹಂತವಾದ  ಸಾವು ಹೇಗಿರಬೇಕು ಎಂದೂ ಸಹ ನಾವೇ ನಿರ್ಧಾರ ಮಾಡಬೇಕಲ್ಲವೇ ?
ಆದೆಷ್ಟೋ ಮಹಾನುಭಾವರು ಹುಟ್ಟುವಾಗ ಬಹಳಷ್ಟು ಬಡವರು, ಅದೇ ಅವರು ಸಾಯುವ ವೇಳೆಗೆ ತಮ್ಮ ತಮ್ಮ ಸಾದನೆಗಳನ್ನು ಚರಿತ್ರೆಯ ಪುಟದಲ್ಲಿ ಎಂದು ಮರೆಯಲಾಗದ ಪುಟಗಳನ್ನಾಗಿ ಮಾಡಿಟ್ಟು ಹೋಗಿದ್ದಾರೆ. ಹಾಗಾದರೆ ಅವರೆಲ್ಲಾ ಏನು ದೈವ ಮಾನವರೇ? ಇಲ್ಲ. ಅವರಲ್ಲಿ ಏನಾದರು ಸಾದಿಸಬೇಕೆಂಬ ಛಲವಿತ್ತು .ಅದೆಷ್ಟೇ ಕಷ್ಟ ಬಂದರೂ ಅದನ್ನೆಲ್ಲಾ ಮೀರಿ ತಮ್ಮ ಆತ್ಮ ಸ್ಥೆರ್ಯದಿಂದ ಸಾಧಿಸಿ ಇಂದು ಚರಿತ್ರೆಯ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅದೆಕ್ಕೆಲ್ಲ ಅವರ ದೃಡ ಮನಸ್ಸು, ಆತ್ಮ ವಿಶ್ವಾಸ ಕಾರಣ.
ನಮ್ಮ ಜೀವನದ ದಿನಗಳನ್ನು ನಿಮಿಷಗಳಲ್ಲಿ ಎಣಿಸಬಹುದು, ಹೀಗಿರುವಾಗ ಈ ಸ್ವಲ್ಪ ಅವದಿಯಲ್ಲಿ ಆ ದೇವರು ಕೊಟ್ಟಿರುವ ಈ ಜೀವನಕ್ಕೆ ಒಂದು ಒಳ್ಳೆ ರೂಪ ಕೊಟ್ಟು ಏನಾದರು ಸಾಧಿಸಿ ಹೋಗಬೇಕಾಗಿರುವುದು ನಮ್ಮ ಕರ್ತವ್ಯ. ಅನವಶ್ಯಕವಾದ ಬೇರೆ ಬೇರೆ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ ಏನಾದರು ಒಂದು ಛಲ ಇಟ್ಟುಕೊಂಡು ಅದನ್ನು ಸಾಧಿಸಿ ತೋರಿಸಲು ಪ್ರಯತ್ನ ಪಡೋಣ. ಒಂದು ವೇಳೆ ಗುರಿ ತಲುಪಲು ಸಾಧ್ಯವಾಗದೆ ಹೋದರೆ ಮತ್ತೊಮ್ಮೆ ಪ್ರಯತ್ನಿಸೋಣ, ಕಾರಣ ಎಲ್ಲರೂ ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದು ಚರಿತ್ರೆಯ ಪುಟಕ್ಕೆ ಹೋದವರಲ್ಲ. ಕೆಲ ಗುರಿಗಳು ಅಷ್ಟು ಬೇಗ ಸಿಗುವಂತದ್ದಲ್ಲ ಅವುಗಳನ್ನು ಸೇರಲು ಬಹಳಷ್ಟು ಶ್ರಮಿಸಬೇಕಾಗುತ್ತದೆ ಅದಕ್ಕೆ ಕಾರಣ ಆ ಗುರಿ ಅಥವಾ ಕ್ಷೇತ್ರಕ್ಕೆ ಇರುವ ಮಹತ್ವ. ಅದು ಎಂತದೆ ಇರಲಿ ಮನಸ್ಸಿದ್ದರೆ ಮಾರ್ಗ ಉಂಟು ಎನ್ನುವಂತೆ ಅದನ್ನು ಬೆಂಬಿಡದೆ ಸಾಧಿಸಬೇಕು. 
ಈ ರೀತಿಯಲ್ಲಿ ನನ್ನ ಬದುಕಿಗೆ ಸ್ಪೂರ್ತಿ ತುಂಬಿದ ಫೇಸ್‍ಬುಕ್‍ಗೂ, ಹಾಗೂ ಅದ್ಭುತವಾದ ಸಂದೇಶವನ್ನು ಅಪ್‍ಡೇಟ್ ಮಾಡಿದ ಆ ಪುಣ್ಯಾತ್ಮನಿಗೂ ಹ್ಯಾಟ್ಸ್‍ಅಪ್.
       - ಸುರೇಶ್ (ಬೆಂಗಳೂರು)

No comments:

Post a Comment