Friday 20 December 2013

ಮನಗೆದ್ದ ಮೆಸ್ಸೇಜಿಂಗ್ ಅಪ್ಲಿಕೇಶನ್ ಗಳು ...

ವಯಸ್ಸು ಇನ್ನೂ ಹರಿನಾರರ ಗಡಿಯನ್ನೂ ಡಾಟಿರುವುದಿಲ್ಲ. ಆದರೂ ಅವರು ಂiವನಿಗರು ಎಂಬುದನ್ನು ಕೈಯಲ್ಲಿರುವ ಮೊಲ್‌ನಿಂದಲೇ ತಿಳಿದು ಕೊಳ್ಳಬೇಕು. ಇಂದಿನ ಯುವ ಪೀಳಿಗೆ  ಮೊಬೈಲ್ ಬಳಸದೇ ಯೌವನ ಶುರುವಾಗೊದೇ ಇಲ್ಲ. ಯೌವನಕ್ಕೂ ಮೊದಲೇ ಮೊಬೈಲ್ ತನ್ನ ಕಾರ್ಯ ಶುರುವಿಟ್ಟುಕೊಂಡಿರುತ್ತೆ. ಎಸ್‌ಎಮ್‌ಎಸ್‌ಗಳ ಹರಿದಾಟ ಆರಂಭವಾಗಿರುತ್ತೆ. ಮೊಬೈಲ್ ಇಲ್ಲದೇ ಎಸ್‌ಎಮ್‌ಎಸ್ ಮಾಡದೇ ಇಂದಿನ ಯುವ ಪೀಳಿಗೆ ಬದುಕಲಾಗದಷ್ಟು ಮೊಬೈಲ್‌ಗಳಿಗೆ ಅಡಿಕ್ಟ್ ಆಗಿದ್ದಾರೆ.. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮೊಬೈಲ್ ಕಂಪನಿಗಳು, ಬೇರೆಬೇರೆ ನೆಟ್‌ವರ್ಕ್ ಸರ್ವಿಸ್‌ಗಳು ಲಾಭ ಮಾಡಿಕೊಳ್ಳುತ್ತಿವೆ. ಹಸಿದ ಇಂದಿನ ಯುವ ಪೀಳಿಗೆಗೆ ಬಗೆಬಗೆಯ ಆಕರ್ಷಕ ಅಪ್ಲಿಕೇಷನ್ಸ್‌ಗಳನ್ನು ಸೃಷ್ಟಿಸಿ ಮತ್ತಷ್ಟು ಮೊಬೈಲ್‌ಗಳಲ್ಲೇ ಮುಳುಗುವಂತೆ ಮಾಡುತ್ತಿವೆ. ಅದರಲ್ಲೂ ಎಸ್‌ಎಮ್‌ಎಸ್‌ಗಳಿಲ್ಲದೇ ಇಂದಿನವರು ಯಾವ ಕೆಲಸವನ್ನೂ ಮಾಡಲಾಗದ ಹಂತಕ್ಕೆ ತಲುಪಿದ್ದಾರೆ. ಮೊಬೈಲ್ ಸೇವಾ ಕಂಪನಿಗಳು ಕೂಡ ಸಾಕಷ್ಟು ಅಗ್ಗದ ದರದಲ್ಲಿ, ವಿಶೇಷ ಎಸ್‌ಎಂಎಸ್ ಪ್ಯಾಕೇಜ್‌ಗಳನ್ನೂ ಒದಗಿಸಿವೆ, ಯುವಜನರು ತಮ್ಮಿಂದ ದೂರವಾಗದಂತೆ ನೋಡಿಕೊಳ್ಳಲು ಹೆಣಗಾಡುತ್ತಿವೆ.
ಇಂಟರ್ನೆಟ್ ವ್ಯವಸ್ಥೆ ಈ ಪುಟ್ಟ ಸಾಧನಗಳಿಗೆ ಯಾವಾಗ ಅಳವಡಿಕೆಯಾಯಿತೋ, ಎಸ್‌ಎಂಎಸ್ ವ್ಯವಸ್ಥೆಗೇ ಸಂಚಕಾರ ಬಂತು. ಇದಕ್ಕೆ ಕಾರಣವೆಂದರೆ, ಇಂಟರ್ನೆಟ್ ಇದ್ದರೆ ಉಚಿತವಾಗಿ ಸಂದೇಶ, ಚಾಟಿಂಗ್ ಜತೆಗೆ, ಚಿತ್ರ, ವೀಡಿಯೋ, ಆಡಿಯೋ ಫೈಲ್‌ಗಳನ್ನು ಕೂಡ ಕಳುಹಿಸಬಹುದು. ಮಾತ್ರವಲ್ಲದೆ, ಉಚಿತ ಕರೆಗಳನ್ನೂ ಮಾಡಬಹುದು. ಹೌದು, ಇಂತಹಾ ಅಪ್ಲಿಕೇಶನ್‌ಗಳಿವೆ ಎಂಬುದು ಬಹುತೇಕರಿಗೆ ಅರಿವಿಲ್ಲ.
ಇಂಥವುಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದುWhatsApp, We-Chat, Viber, Skype
ಮುಂತಾದ ಅಪ್ಲಿಕೇಶನ್‌ಗಳು. ಇದಕ್ಕೆ ಹೊಸದಾಗಿ Line    ಸೇರ್ಪಡೆಯಾಗಿದೆ.  ಎಲ್ಲ ರೀತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಿಸುವಂತೆ ಈ ಅಪ್ಲಿಕೇಶನ್‌ಗಳನ್ನು ರೂಪಿಸಲಾಗಿದೆ. ಹೀಗಾಗಿ, ನಿಮ್ಮ ಸ್ನೇಹಿತರ ಬಳಿಯೂ ಈ ಆಪ್ ಇದ್ದರೆ ಉಚಿತವಾಗಿ ಚಾಟಿಂಗ್ ಮಾಡಬಹುದು, ಧ್ವನಿ ಅಥವಾ ವೀಡಿಯೋ ರೆಕಾರ್ಡ್ ಮಾಡಿ ಆಡಿಯೋ/ವೀಡಿಯೋ/ಚಿತ್ರ ಸಂದೇಶಗಳನ್ನೂ ಉಚಿತವಾಗಿ ಕಳುಹಿಸಬಹುದು. ಉಚಿತವಾಗಿಯೇ ಆಡಿಯೋ ಸಂದೇಶ, ಚಿತ್ರ ಅಥವಾ ಟೆಕ್ಸ್ಟ್ ಮೇಸೇಜ್ ಹೀಗೆ ಕಳುಹಿಸಬಹುದು.
ನೀವು ಹಳೇ ಕಾಲದ ಮೊಬೈಲ್‌ಗಳಿಂದ ಇಂದನ ಜನರೇಷನ್‌ಗೆ ಹೊಂದಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಮೊದಲು ಬದಲಾಗಬೇಕು. ನಿಮ್ಮ ಮೊಬೈಲ್ ಮತ್ತು ಸ್ನೇಹಿತರ ಮೊಬೈಲ್‌ಗೆ ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ. ಯಾವುದಾದರೂ ಆಪ್ (ಹೆಚ್ಚು ಪ್ರಸಿದ್ಧವಾಗಿರುವುದು WhatsApp,, ಮತ್ತು ಈಗೀಗ Line ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಐiಟಿe) ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಸ್ನೇಹಿತವರ್ಗವೂ ಅದೇ ಆಪ್ ಬಳಸಬೇಕಾಗುತ್ತದೆ. ಒಂದು ಸಲ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
ರಿಜಿಸ್ಟರ್ ಆದ ಬಳಿಕ, ಆ ಅಪ್ಲಿಕೇಶನ್ ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ಸ್ನೇಹಿತರ ಸಂಖ್ಯೆಯನ್ನೆಲ್ಲಾ ಹುಡುಕಿ, ಯಾರೆಲ್ಲಾ ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ ಎಂದು ನಿಮಗೆ ತೋರಿಸುತ್ತದೆ. ಅವರೊಂದಿಗೆ ಹಾಯ್ ಹೇಳುವ ಮೂಲಕ ಮಾತುಕತೆ ಆರಂಭಿಸಬಹುದು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನಿಮ್ಮದೇ ಒಂದು ಗ್ರೂಪ್ ಕಟ್ಟಿಕೊಂಡು, ಚಾಟಿಂಗ್ ನಡೆಸಬಹುದು. ಇಂತಹಾ ಆಪ್‌ಗಳಲ್ಲಿ ಸ್ಮೆಲಿಗಳು ಅಥವಾ ಎಮೋಟಿಕಾನ್‌ಗಳು ಎಂದು ಕರೆಯಲಾಗುವ ವಿಭಿನ್ನ ಭಾವನೆಗಳನ್ನು ತೋರ್ಪಡಿಸುವ ಮುಖಭಾವಗಳ ಚಿತ್ರಗಳು ಉಚಿತವಾಗಿ ಲಭ್ಯವಾಗಿದ್ದು, ನಿಮ್ಮ ಸಂಭಾಷಣೆಗಳಿಗೆ ಭಾವನೆಗಳನ್ನು ಸೇರಿಸಬಹುದು!
Line  ಅಪ್ಲಿಕೇಶನ್‌ನ ಒಂದು ಅನುಕೂಲವೆಂದರೆ, ೩ಜಿ ಸಂಪರ್ಕದ ಮೂಲಕ ಉಚಿತವಾಗಿ ಕರೆಯನ್ನೂ ಮಾಡಬಹುದು. ಇತ್ತೀಚೆಗಷ್ಟೇ ಭಾರತಕ್ಕೆ ಕಾಲಿರಿಸಿರುವ ಜಪಾನ್‌ನ ಈ ಕಂಪನಿ, ಮೂರೇ ತಿಂಗಳಲ್ಲಿ ೧ ಕೋಟಿ ಬಳಕೆದಾರರನ್ನು ಹೊಂದಿದೆ ಅಂತ ಹೇಳಿಕೊಂಡಿದೆ. ಹೀಗಾಗಿ ಇದನ್ನೂ ಟ್ರೈ ಮಾಡಬಹುದು.