Saturday 22 September 2012

* ಸಾವಿಗೂ ಮೀರಿದ ಪ್ರೀತಿ....





ಹೌದು, ಹೆಣ್ಣಾಗಲಿ, ಗಂಡಾಗಲಿ ಒಬ್ಬ ಒಬ್ಬ ಮನುಷ್ಯನ ಮನಸ್ಸನ್ನು ಪ್ರೀತಿ ಒಮ್ಮೆ   ಆವರಿಸಿದರೆ.. ಎಂತಹವರನ್ನಾದರೂ ಬದಲಾಯಿಸಿಬಿಡುತ್ತೆ. ನಿಜವಾದ ಪ್ರೀತಿ ಎಂಬ  ಭಾವನೆಯ ಮುಂದೆ ಜಾತಿ, ಅಂತಸ್ತು ತನ್ನ ಬೆಲೆಯನ್ನ ಕಳೆದುಕೊಳ್ಳುತ್ತೆ.. ಎಂತಹ ಕಲ್ಲು ಮನಸ್ಸನ್ನು ಕೂಡ ಭಾವನಾತ್ಮವಾಗಿ ಬದಲಾಯಿಸಿಬಿಡುವಂತಹ ಶಕ್ತಿ ಪ್ರೀತಿಯಲ್ಲಿದೆ.  ಪ್ರತಿದಿನ ಸಾವಿರಾರು ಲವ್ಸ್ಟೋರಿಗಳು ಆರಂಭವಾದರೆ, ಅದಕ್ಕಿಂತ ಹೆಚ್ಚು ಲವ್ ಸ್ಟೋರಿಗಳು ಕೊನೆಗೊಳ್ಳುತ್ತವೆ.  ಅದರಲ್ಲಿ ಟ್ರ್ಯಾಜಿಡಿಯಲ್ಲಿ ಕೊನೆಯಾಗುವ ಕಥೆಗಳೇ ಜಾಸ್ತಿ..ಆದರೆ ಪ್ರೀತಿಯೆಂಬುದು ಯಾವತ್ತು ನಾವು ಮಾಡುವುದಲ್ಲ. ಅದು ತಾನಾಗಿಯೆ ಯಾವತ್ತು , ಎಲ್ಲಿ ಹೇಗೆ , ಯಾರೊಂದಿಗೆ, ಎಂತಹ ಪರಿಸ್ಥಿತಿಯಲ್ಲಿ ಮೊಳಕೆಯೊಡೆಯುತ್ತೋ ಗೊತ್ತೇ ಆಗೊಲ್ಲ.. ಪ್ರೀತಿ ಹುಟ್ಟಿಗೆ ಕಾರಣ ಕೊಡುವುದು ಕಷ್ಟ...ಪ್ರೀತಿಯೆಂಬುದೊಂದು ಯಾತನೆ...ಅಲ್ಲ ಮಧುರ ಯಾತನೆ.. ಒಂದು ಕ್ಷಣ ನೋವೆನಿಸಿದರೂ ಅದರ ಮರುಕ್ಷಣವೇ ಅದೇ ನೋವು ಏನೋ ಖುಷಿ ನೀಡುತ್ತಿರುತ್ತೆ...ಒಂದೇ ಮಾತಿನಲ್ಲಿ ಹೇಳುವುದಾದರೆ ಅದೊಂದು ಹುಚ್ಚು..ಆದರೆ ಅದು ಪ್ರೀತಿಸಿದವರಿಗೆ ಯಾವತ್ತೂ ಅಚ್ಚು ಮೆಚ್ಚು. ಅದು ಪ್ರೀತಿಸುವವರ ಪಾಲಿಗೆ ಗ್ರೇಟ್ ಅನಿಸಿಬಿಡುತ್ತೆ.
ಥೈಲ್ಯಾಂಡ್ನಲ್ಲಿ ಚಾಂದಿಲ್ ಡೇಫಿ ಎಂಬ ೨೯ ವರ್ಷದ ಯುವಕ ೨೮ ವರ್ಷದ ಸಾರಿಯಾ ಎಂಬ ಯುವತಿ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಒಂದು ಕ್ಷಣವೂ ಬಿಟ್ಟಿರದ ಜೋಡಿ. ಮುಂದಿನ ಒಂದು ವರ್ಷದಲ್ಲೇ ಮದುವೆಯಾಗಿ ಜೀವನ ನಡೆಸುವ  ಕೋಟ್ಯಾಂತರ ಕನಸುಗಳನ್ನು ಕಟ್ಟಿಕೊಂಡು ದಿನಕ್ಕೋಸ್ಕರ ಕಾತುರತೆಯಿಂದ ಎದುರುನೊಡುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿ ದೇವರಿಗೆ ಅದೇಕೊ ಇಷ್ಟವಾದಂತೆ ಕಾಣಲಿಲ್ಲ.  ನಾಳೆ ಸೂರ್ಯೋದಯಕ್ಕೆ  ಮದುವೆಯ ದಿನವೂ ನಿಗದಿಯಾಗಿತ್ತು ..ಅದರ ಹಿಂದಿನ ದಿನವೇ ಸಾರಿಯಾ ಪ್ರಯಾಣಿಸುತ್ತಿದ್ದ ಕಾರು ಅಫಘಾತಕ್ಕೊಳಗಾಯಿತು. ತನ್ನ ಜೀವನದ ಕನಸುಗಳನ್ನು ತನ್ನೆದೆ ಗೂಡಿನಲ್ಲಿಟ್ಟುಕೊಂಡು, ಅದನ್ನೇ ನೆನೆದು ತನ್ನೊಳಗೆಯೇ ಮುಗುಳುನಗುತ್ತ ಪ್ರಯಾಣಿಸುತ್ತಿದ್ದ ಸಾರಿಯಾ ನಡು ರಸ್ತೆಯಲ್ಲಿ ಅನಾಥವಾಗಿ ತನ್ನ ಪ್ರಾಣ ಬಿಟ್ಟಿದ್ದಳು. ಸಾರಿಯಾಳ ರಕ್ತವಷ್ಟೇ ಅಲ್ಲ, ಅವಳ ಕನಸುಗಳ ಗೋಪುರವು ಕೂಡ ನೆಲಸಮವಾಗಿತ್ತು. ಮರುದಿನ ಮದುವೆಗೆಂದು ಎಲ್ಲವನ್ನೂ ಸಿದ್ದಪಡಿಸಿಕೊಂಡು ತನ್ನವಳಿಗಾಗಿ ಎದುರುನೋಡುತ್ತಿದ್ದ ಡೆಫಿ  ತನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದ ಪ್ರೇಯಸಿಯ ಸಾವಿನ ಸುದ್ದಿ ಸುನಾಮಿಯಂತೆ ಬಂದು ಡೆಫಿ ಕಟ್ಟಿದ್ದ ಕನಸಿನ ಗೋಪುರ ಕೊಚ್ಚಿಹೋಗಿತ್ತು. ಕೂಡಲೇ ಆಸ್ಪತ್ರೆಗೆ ಧಾವಿಸಿದ ಅವನ ಆಗಮನವನ್ನು  ಶವಪರೀಕ್ಷೆಯಾದ ಸಾರಿಯಾ ದೇಹ ಎದುರುನೋಡುತ್ತಿತ್ತು. ಹೊತ್ತಿಗೆ ಅವರ ಮದುವೆಗೆ ನಿಗದಿಯಾದ ಸಮಯಕ್ಕೆ ಇನ್ನು  ಐದೇ ನಿಮಿಷ ಬಾಕಿ. ತಡ ಮಾಡದ ಡೆಫಿ ತನ್ನ ಮೃತ ವಧುವಿಗೆ ತನ್ನ ಜೇಬಲ್ಲಿದ್ದ ಉಂಗುರವನ್ನು ಸಾರಿಯಾ ಬೆರಳಿಗೆ ತೊಡಿಸಿ ಐತಿಹಾಸಿಕ ಮದುವೆಯಾಗಿದ್ದ. ಇಂತಹ ಘಟನೆ  ಪ್ರಪಂಚದಲ್ಲಿ ರೀತಿಯ ಮದುವೆಯೂ ಆಗುತ್ತೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.

No comments:

Post a Comment